 ಜಿನು ಜಿನುಗೋ 
 ಚಿತ್ರ: ಕಂಠಿ
 ಹಾಡು: ಜಿನು ಜಿನುಗೊ
 ಗೀತೆ ರಚನೆ: ಕವಿರಾಜ್
 ಸಂಗೀತ: ಗುರುಕಿರಣ್
 ಹಾಡುಗಾರರು: ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರಾ

ಜಿನು ಜಿನುಗೊ ಜೇನ ಹನಿ, ಮಿನು ಮಿನುಗೊ ತುಟಿಗೆ ಇಬ್ಬನಿ (೨) 
ಈ ನಯನದಲಿ ಸಂಗಾತಿ  ಸಂಪ್ರೀತಿ ನಲಿನಲಿನಲಿಯುತಿದೆ  |ಜಿನು | 

ಒಮ್ಮೊಮ್ಮೆ ನಾನೆ ಕೇಳೋದು ನನ್ನೆ ನೀ ಸೂರ್ಯನ ಬಂಧುವೆ 
ನಿನ್ನನ್ನು ಕಂಡೆ ನಾನಂದುಕೊಂಡೆ ನೀ ಚಂದ್ರನ ತಂಗಿಯೆ  
ಆ ಮಿಂಚು ಕೊಂಚ ನಿಲ್ಲದು ಬರಿ ಮಿಂಚಿ ಹೋಗುತಿಹುದು 
ನಿನ ಕಾಂತಿ ಕಂಡು ನಸು ನಾಚಿಕೊಂದು ಬರಿ ಮುಗಿಲಲೆ ಇಣುಕಿಹುದು  | ಜಿನು | 

ನೀ ನಕ್ಕ ಮೋಡಿ ಆ ಚುಕ್ಕಿ ನೋಡಿ ಬಾನಿಂದಲೇ ಜಾರಿದೆ 
ಆ ಬೆಳ್ಳಿ ಮೋಡ ಬೆಳ್ಳಕ್ಕಿ ಕೂಡ ನಿನ ನೋಡುತ ನಿಂತಿದೆ 
ಆ ಚೈತ್ರ ಚಿತ್ರ ಬರೆದು ಆ ಚಿತ್ರ ಜೀವ ತಳೆದು  
ಇದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ ಈ ಹರುಷವ ಹರಡಿಸಿದೆ | ಜಿನು |

Category: ಕನ್ನಡ ಚಿತ್ರಸಾಹಿತ್ಯ
ಕಂಠಿ
ಕವಿರಾಜ್
ಗುರುಕಿರಣ್